Monday, February 7, 2011

ಕವನದಂತಹ ಸಾಲುಗಳು

ಕೆಲ ಸಂದಿಗ್ಧಗಳು ಜೀವವನ್ನೇ ಹಿಂಡುತ್ತವೆ,
ಏನೊಂದೂ ಅರ್ಥವಾಗದೇ...
ಬದುಕು ಹೀಗೇ ಇರಬೇಕೆಂದು ಬಯಸಿದ
ಮನಸು ಘಾಸಿಯಾದ ಪ್ರತಿ ಕ್ಷಣಗಳೂ
ಬಹುಶಃ ಹೀಗೆಯೇ ಇರುತ್ತವೆಯೆನೋ

ಎದೆಯಲೊಸರುವ ಪ್ರತಿಯೊಂದು ನೋವಿಗೂ
ಪದಗಳು ಸಿಗುವುದು ಅಪರೂಪ
ಆದರೂ ಪ್ರತಿ ನೋವಿನ ಕ್ಷಣದಲೂ
ಏನಾದರೊಂದು ಬರೆಯಬೇಕೆನಿಸುತ್ತದೆ
ಏನೂ ಬರೆಯಲಾಗದೇ ಮನ ತಡವರಿಸುತ್ತದೆ
ತಡವರಿಸಿ ಬರೆದ ಮಾತುಗಳೆಲ್ಲ ಬಿಕ್ಕಲನ ಮಾತಿನಂತೆ
ತಾಳ್ಮೆಯಿದ್ದರೆ ತಿಳಿದಾವೂ...
ಇಲ್ಲವೆಂದರೆ ಪದಪುಂಜ ಪದಬಂಧದಂಂತೆ ಭಾಸವಾಗಿ
ಪುಸ್ತಕವಾದರೆ ಪುಟ ತಿರುವಿ, ಹಾಳೆಯಾದರೆ ಹರಿದೆಸೆದು
ಮುಂದೆ ನಡೆದಾರೂ...

ಹುಚ್ಚು ಕುತೂಹಲಕೊಂದು ಚಿಕ್ಕ ಪೂರ್ಣವಿರಾಮ ಇಡುವೆನೆಂದರೂ
ಮನಸು ಕೇಳುವುದುದೊಡ್ಡ ಪೂರ್ಣವಿರಾಮ ಎಂತಹುದು?
ಆದರ ಈದರಗಳನ್ನೆಲ್ಲ ಬದಿಗೆ ಸರಿಸಿದಾಗಲೂ
ನಾನು ಬರೆದುದು ಶ್ರೇಷ್ಠವೇ, ಏಕೆಂದರೆ
ನನ್ನ ಮನದ ಸಂದಿಗ್ಧಗಳಿಗೆಲ್ಲ ನಿರಾಳತೆಯ ಸಿಂಚನವನುಣಿಸಿದ ಸಾಲುಗಳವು

Saturday, August 21, 2010

ಕರೆಂಟ್ ಇನ್ ಕರ್ನಾಟಕ

ನಮ್ಮ ಏರಿಯಾಕ್ ಕರೆಂಟು ಬಂತು
ಕರೆಂಟು ಜೊತೆಗೆ ಕಂಬ ಬಂತು,
ಮನೆಯಲಿ ದೀಪ ಉರಿಯಲೆ ಇಲ್ಲ,
ಶೆಲ್ಲಿನ ರೇಡಿಯೊ ಹೇಳ್ತಾಯಿತ್ತು, ಲೋಡ ಶೆಡ್ಡಿಂಗು
ಆದ್ರೆ ನಮ್ಮ ರೂಬಿಗ್ ಬೇಜಾರಿಲ್ಲಾ,
ಕಂಬದ ಪಕ್ಕ ನಿಲ್ತಾಯಿತ್ತು ಕಾಲು ಎತ್ಕೊಂಡು.

ಬಡವನ ರಾತ್ರಿ

ಹೊತ್ತು ಮುಳುಗಿದ ಮೇಲೆ ಕತ್ತಲಾಗುವುದು
ದೀಪದ ಬೆಳಕು ಕಾಣಲು ಕತ್ತಲಿದ್ದರಷ್ಟೇ ಸಾಲದು
ದೀಪದಲಿ ಎಣ್ಣೆಯೂ ಇರಬೇಕು.

ಕತ್ತಲಾದ ಮೇಲೆ ಜಗವೇ ಮಲಗುವುದು
ಮಲಗಲು ಬರೀ ಹಾಸಿಗೆಯಿದ್ದರಷ್ಟೇ ಸಾಲದು,
ಹಸಿದ ಹೊಟ್ಟೆಯೂ ತುಂಬಬೇಕು.

ರಾತ್ರಿ ಹಸಿವಾದರೆ ಕೂಸು ಅಳುವುದು,
ಅದರಳು ನಿಲ್ಲಲು ಬಾಯಲ್ಲಿ ಮೊಲೆಯಿಡಟ್ಟರಷ್ಟೇ ಸಾಲದು,
ನನ್ನವಳ ಎದೆಯಲ್ಲಿ ಹಾಲೂ ಇರಬೇಕು.

ಅರ್ಥವಿಲ್ಲದ ಪ್ರಶ್ನೆ

ಅದೆಷ್ಟೊ ದಿನ ಊಟ ಬಿಟ್ಟೆ,
ರಾತ್ರಿಯೆಲ್ಲ ನಿದ್ದೆಗೆಟ್ಟೆ,
ಮನಸೆಂಬುದೇ ಮುಳ್ಳಾಗಿ,
ಎದೆಗೆ ಚುಚ್ಚಿದ ನೋವನ್ನೂ ಸಹಿಸಿದೆ.
ಸುತ್ತಲಿನವರು ನೋಡಿ ನಕ್ಕಾಗ,
ಆದ ಅವಮಾನವನ್ನೂ ಭರಿಸಿದೆ.
ಆದರೂ ನೀನು ಸಿಗಲಿಲ್ಲವೆಂದ ಮೇಲೆ,
ನನ್ನ ಜೀವನದಲ್ಲಿ ನೀ ನೀಡಿದ ನೋವಿಗೆಲ್ಲ ಏನು ಅರ್ಥ?

ಅರ್ಥವಿಲ್ಲದ ಪ್ರಶ್ನೆ

ಅದೆಷ್ಟೊ ದಿನ ಊಟ ಬಿಟ್ಟೆ,
ರಾತ್ರಿಯೆಲ್ಲ ನಿದ್ದೆಗೆಟ್ಟೆ,
ಮನಸೆಂಬುದೇ ಮುಳ್ಳಾಗಿ,
ಎದೆಗೆ ಚುಚ್ಚಿದ ನೋವನ್ನೂ ಸಹಿಸಿದೆ.
ಸುತ್ತಲಿನವರು ನೋಡಿ ನಕ್ಕಾಗ,
ಆದ ಅವಮಾನವನ್ನೂ ಭರಿಸಿದೆ.
ಆದರೂ ನೀನು ಸಿಗಲಿಲ್ಲವೆಂದ ಮೇಲೆ,
ನನ್ನ ಜೀವನದಲ್ಲಿ ನೀ ನೀಡಿದ ನೋವಿಗೆಲ್ಲ ಏನು ಅರ್ಥ?

Thursday, December 31, 2009

ಸಾಹಸ ಸಿಂಹ ನಿಗೆ ಭಾವಪೂರ್ಣ ಶ್ರದ್ದಾಂಜಲಿ

Monday, October 12, 2009

ಕನಸು
ಕಣ್ಣಿಗೇನು ಕೆಲಸ? ಕನಸು ಕಾಣುತ್ತದೆ ಮನಸಿಗೆ ಬಂದಂತೆ,
ಹಗಲು ಇರುಳಿನ ಭೇದವಿಲ್ಲದೆ, ಅವರ ಇವರ ಗೊಡವೆಯಿಲ್ಲದೆ.
ಕೆಲ ಸಾರಿ ನನ್ನ ಕನಸುಗಳಿಗೆ ನಾನೇ ನಾಚುತ್ತೇನೆ, ಬೆಚ್ಚಿ ಬೀಳುತ್ತೇನೆ.
ಸರಿ ತಪ್ಪುಗಳ ಚಿಂತೆಯಾದರೂ ಬೇಡವೇ? ನಾಚಿಕೆಯಿಲ್ಲದ್ದು.
ಜಗತ್ತೇನು ಚಿಕ್ಕದೇ! ಗೆದ್ದು ಬಿಡಬೇಕೆನ್ನುತ್ತದೆ,
ಆಳ ಅಗಲಗಳ ಅರಿವೆಯಿಲ್ಲದ ಬುದ್ಧಗೇಡಿ.
ಬೈದರಿಲ್ಲ, ಉಗಿದರಿಲ್ಲ. ತನ್ನ ಪಾಡಿಗೆ ತಾನು ಓಡುತ್ತಲೇ ಇರುತ್ತದೆ, ಹುಚ್ಚು ಕುದುರೆ.

ಏನೂ ಇರದ ಬದುಕಿನಲ್ಲೂ ಬಣ್ಣವನು ಬಿತ್ತುತ್ತದೆ
ಕಾಣದ ನಾಳೆಗೂ ರೆಕ್ಕೆಯನು ಕಟ್ಟುತ್ತದೆ
ಪ್ರತಿ ಬಿಕ್ಕಳಿಕೆಗೂ ಏನೊ ಒಂದು ಅರ್ಥ, ಯಾರೋ ಬಂದಂತೆ ಬದುಕಿನಲಿ.
ಪ್ರತಿ ಬಯಕೇಗೂ ಒಂದು ಚಿತ್ರ, ಬರೆದು ತೋರಿಸುವುದು ಕ್ಷಣದಲಿ
ನನಸಾಗುವುದೋ, ಮಣ್ಣಾಗುವುದೋ ಆದರೂ ಈ ಕ್ಷಣಗಳಿಗೆ ಬಣ್ಣ ತುಂಬುವ ಕಲೆಗಾರ
ಅದಕೇ ಎಂಥ ಬುದ್ದಿಗೇಡಿಯಾದರೂ, ನನ್ನ ಕನಸೇ ನನ್ನ ಜೊತೆಗಾರ